Mugulu Nage All Songs Lyrics Kannada

ಮುಗುಳುನಗೆ ಹಾಡುಗಳ ಸಾಹಿತ್ಯ 

1. Roopasi ರೂಪಸಿ Song Lyrics:

ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು...

ಇಷಾರೆಯ ನೀ ನೀಡು
ಹುಷಾರುಗುವೆ
ನನಗಾಗುವ ಕನಸೆಲ್ಲವು
ಬರಿ ಇಂಥವೇ

ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು...

ನಾಚಿವೇ ನಿನ್ನನು
ನೋಡಿ ಹೂವಿನ ಅಂಗಡಿ
ಮೆಲ್ಲಗೇ ಕಣ್ಣಲೇ
ಗೀಚು ಮುತ್ತಿನಾ ಮುನ್ನುಡಿ

ಮಂದಹಾಸವೇ ನನ್ನ ಆಸ್ತಿಯು
ಈಗ ನಿನ್ನ ಪಾಲೂ
ತಮಾಷೆಗೂ ಕೈ ಚಾಚೂ
ತಯಾರಾಗುವೆ
ಬಡಪಾಯಿಯ ಮನರಂಜನೆ
ಬರಿ ಇಂಥವೇ

ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು...

ನಿನ್ನನು ಕಾಣುವಾ
ಜಾಗ ಖಾಸಗೀ ಸ್ಮಾರಕ
ನನ್ನನು ಆಪ್ತನು
ಎಂದು ಮಾಡಿಕೋ ನೇಮಕ

ಎಲ್ಲೇ ಎಸೆದರೂ ನಿನ್ನ ಕಣ್ಣಲೇ
ಬಂದು ಬೀಳುವಾಸೆ
ನಿನ್ನ ಜೇವದಲ್ಲೀಗಾ
ಜಮಾ ಆಗುವೆ..
ನಡುಬೀದಿಯ ಜ್ಞಾನೋದಯ
ಬರೀ ಇಂಥವೇ

ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೇ ನೋಡುತ ಕೂತು?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು...

2. ನಿನ್ನ ಸ್ನೇಹದಿಂದ Ninna Snehadinda Lyrics

ನಿನ್ನ ಸ್ನೇಹದಿಂದ
ಎಲ್ಲಾ ಚಂದ ಚಂದ
ನಿಂಗೆ ಧನ್ಯವಾದ
ತುಂಬು ಹ್ರುದಯದಿಂದ
ಮನದಲೊಂದು ಮಧುರ ಮೈತ್ರಿ ಜೀವ ಪದೆಯುತಿದೆ
ಪ್ರತಿ ಬಿಂಬವು ಪ್ರೇಮದ ಹೂವು ಮುಡಿಯುತಿದೆ

ನಿನ್ನ ಸ್ನೇಹದಿಂದ
ಎಲ್ಲಾ ಚಂದ ಚಂದ
ಹ್ಮ್
ನಿಂಗೆ ಧನ್ಯವಾದ
ತುಂಬು ಹ್ರುದಯದಿಂದ

ತುಂಬ ಸನಿಹದಲಿ
ತುಂಟ ಧನಿಯಲ್ಲಿ
ಹುಸಿ ಕೋಪವ ಕಲಿಸು,
ತುಸು ನಾಚಿಕೆ ಬಿಡಿಸು
ಕುಂತ ಜಾಗದಲಿ
ಕುಂಟು ನೆಪ ಹೇಳಿ
ಕಿರು ಬೆರಳ ನೇವರಿಸು
ಒಂದಿನಿತು ಆವರಿಸು
ಸರಳವಾದ ಸರಸವನ್ನು ಅಧರ ಬಯಸುತಿದೆ...
ನಿನ್ನಿಂದಲೇ ರಸಿಕತೆ ಉದಯವಾಗುತಿದೆ...

ನಿನ್ನ ಸ್ನೇಹದಿಂದ
ಎಲ್ಲಾ ಚೆಂದ ಚೆಂದ
ಹ್ಮ್
ಒಂದೇ ಕಣ್ಣಿನಿಂದ
ನಿಂಗೆ ಧನ್ಯವಾದ

ಆ...

ನೀನೆ ಹೇಳು
ನೀನೆ ಹೇಳು
ಸತಾಯಿಸುವ ಆಸೆಗಳನು
ಹೇಗೆ ಹೇಳಲಿ ನಾ?
ಅಂದಗಾರ ನಿನ್ನ ನೋಡಿ,
ನಿಧಾನಿಸಲು ಸಾಧ್ಯವಿಲ್ಲ ಏನು ಮಾಡಲಿ ನಾ?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ...
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ...

ನಿನ್ನ ಸ್ನೇಹದಿಂದ
ಎಲ್ಲಾ ಚೆಂದ ಚೆಂದ
ಓ...
ಒಳ್ಳೇ ರೀತಿಯಿಂದ
ನಿಂಗೆ ಧನ್ಯವಾದ...

Comments